ಬೆಳಕಿಗೆ ಬದುಕು
ಹಣತೆ ಹಚ್ಚ ಹೊರಟವನಿಗೆ
ಮತ್ತದೇ ನೋವು-ನಿರಾಸೆ..
ಹಗಲಿರುಳಿನ ಶ್ರಮ-ಶ್ರದ್ದೆಗಳಿಗೆ
ವಿದಿಯ ಕೊಡಲಿಯ ಪೆಟ್ಟು
ಕಳಚಿಕೊಳ್ಳಲಿಲ್ಲ ಶ್ರಮ
ಕಳೆದು ಹೋಗಲಿಲ್ಲ ಶ್ರದ್ದೆ
ತಾನು ಹಣತೆಯಾಗದಿದ್ದರೇನು..?
ನೂರಾರು ಹಣತೆಗಳ ಹಚ್ಚುವ
ತವಕದಲಿ ನಿರಂತರ ಕೃಷಿ!
ಬೆಳಕಾಗದಿದ್ದರೇನಂತೆ..ಕತ್ತಲೆಯಲಿ ನಿರಾಸೆ
ನುಂಗಿ ಬೆಳಕಿಗೆ ದಾರಿ
ತೋರಬಹುದಲ್ಲ..
ಕತ್ತಲೆಯ ಕಡಲಲ್ಲೇ ಬೆಳಕಿಗೆ ಬದುಕು ನೀಡಬಹುದಲ್ಲ…
__ವಾಸುದೇವತನಯ