loader
 • SRI VAASUDEVA AKSHARA DHAMA

 • SRI VAASUDEVA AKSHARA DHAMA

 • SRI VAASUDEVA AKSHARA DHAMA

 • SRI VAASUDEVA AKSHARA DHAMA

 • SRI VAASUDEVA AKSHARA DHAMA

 • SRI VAASUDEVA AKSHARA DHAMA

Privacy Policy :

Please click here to go through the Privacy Policy of SJSMAG Android AppAbout Us : ನಾವು ಯಾರು ? | ನಾವು ಏನು ಮಾಡುತ್ತೇವೆ ? | ನಾವು ಹೇಗೆ ಕೆಲಸ ಮಾಡುತ್ತೇವೆ | ನೀವು ಹೇಗೆ ನಮ್ಮ ಪ್ರಯೋಜನ ಪಡೆಯಬಹುದು

ನಾವು ಯಾರು ?

 • ನಾವು ಸಾಕಷ್ಟು ಸಮಯದಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.

 • ನಾವು ನಮ್ಮ ವ್ಯವಸ್ಥೆಯಲ್ಲಿ ಸಮಾನ ಶಿಕ್ಷಣ ಸೌಲಭ್ಯದ ಕೊರತೆಯನ್ನು ಕಂಡುಕೊಂಡವರು ಮತ್ತು ಆ ಕೊರತೆಯನ್ನು ನೀಗಿಸಲು ನಮ್ಮ ಸಾಮರ್ಥ್ಯದನುಸಾರ ಕಾರ್ಯಪ್ರವೃತ್ತರಾಗಿರುವವರು

 • ಶಿಕ್ಷಣವು ಕಲ್ಪಿಸುವ ಸೌಲಭ್ಯಗಳನ್ನು ಭಾಷೆ ಮತ್ತು ಭೌಗೋಳಿಕ ವ್ಯತ್ಯಾಸಗಳಿಂದಾಗಿ ಸಮರ್ಪಕವಾಗಿ ಮತ್ತು ಸಮವಾಗಿ ಬಳಸಿಕೊಳ್ಳಲಾಗದ ಅಸಹಾಯಕತೆಯನ್ನು ನೋಡಿದವರು ನಾವು.

 • ಗ್ರಾಮೀಣ ಪ್ರತಿಭೆಗಳು ನಗರಿಕರಣ, ಆಧುನಿಕ ಶಿಕ್ಷಣ ವ್ಯವಸ್ಥೆ, ಜಗಮಗಿಸುವ ಶಾಲಾ-ಕಾಲೇಜುಗಳು,ನಿಷ್ಪ್ರಯೋಜಕ ಶಿಕ್ಷಣ(worthless courses) ಗಳ ನಡುವೆ ದಿಕ್ಕೆಟ್ಟವರಂತೆ ನಿಂತ ಸ್ಥಿತಿಯನ್ನು ನೋಡಿ ಮರುಗಿದವರು.

 • ಕರ್ನಾಟಕದ ಬ್ಯಾಂಕ್ಗಳುರೈಲ್ವೆ, ಅಂಚೆಮತ್ತಿತ್ತರ ಸಾರ್ವಜನಿಕ ಸೇವೆಯ ಸಂಸ್ಥೆಗಳಲ್ಲೂ ಕನ್ನಡ ಬಾರದ ಜನರು ಕೆಲಸಗಳನ್ನು ಪಡೆದು ಕನ್ನಡವಷ್ಟೇ ಗೊತ್ತಿರುವ ಜನಗಳೊಡನೆ ಸಂವಹನಗೊಳಿಸಲಾಗದೆ ಪರೆದಾಡುವುದನ್ನು ನೋಡಿದವರು.

 • ಸಂವಿಧಾನವು ನಮಗೆ ಪ್ರಧಾನ ಮಾಡಿರುವ ಎಲ್ಲಿ ಬೇಕಾದರೂ ಕೆಲಸ ಮಾಡುವ ಮತ್ತು ಜೀವಿಸುವ ಹಕ್ಕನ್ನು ನಮ್ಮ ಕನ್ನಡಿಗರು ಭಾಷೆಗಳನ್ನು ಕಲಿಯಲಾಗದ ಅಸಹಾಯಕತೆಯಿಂದ ಅನ್ಯರಿಗೆ ಸಕಲ ಅವಕಾಶಗಳನ್ನು ಕೈಚೆಲ್ಲಿದ್ದನ್ನ ಅರ್ಥಮಾಡಿಕೊಂಡಿರುವವರು ನಾವು.

 • ಶಿಕ್ಷಣವೆಂಬುದು, ಸ್ಪರ್ಧೆ ಎಂಬುದು, ಅವಕಾಶವೆಂಬುದು ಕೇವಲ ಉಳ್ಳವರ ಆಸೆ-ಕನಸುಗಳಾಗಿ, ನಮ್ಮಿಂದ ಅವು ಸಾಧ್ಯವೇ ಇಲ್ಲ ಎಂದು ಹತಾಶರಾಗಿ ಕುಳಿತವರನ್ನು ನೋಡಿದವರು ನಾವು.

 • RTE ಕಾಯ್ದೆಯು ಜಾರಿಗೆ ಬಂದರೂ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆದರೂ ಇತರೆ ಮಕ್ಕಳಂತೆ – ಇತರೆ ಪೋಷಕರಂತೆ ಯಾವ ವಿಷಯದಲ್ಲೂ ಸ್ಪರ್ಧಿಸಲಾಗದ ಮಕ್ಕಳು ಮತ್ತು ಪೋಷಕರನ್ನು ನೋಡಿ ಕೊರಗುವವರು ನಾವು.

 • ಶಾಲಾ – ಕಾಲೇಜುಗಳಲ್ಲಿ ಉತ್ತಮ ಮತ್ತು ಸಮರ್ಥ ಶಿಕ್ಷಕ – ಉಪನ್ಯಾಸಕರ ಕೊರತೆಯನ್ನು ಕಂಡವರು ನಾವು. ಗುರುವಿನಲ್ಲಿ ವಿದ್ಯಾರ್ಥಿಗಳೆಡೆಗೆ ಶ್ರದ್ಧೆಯ, ಪ್ರೀತಿಯ ಕೊರತೆಯನ್ನು ಕಂಡವರು ನಾವು.

 • ಪ್ರತಿಭೆಗಳಿಗೆ ಅಭಿವ್ಯಕ್ತಿಗೆ ಸೂಕ್ತ ವೇದಿಕೆಯ ಅಭಾವವಿರುವುದನ್ನು ತಿಳಿದು ಸೂಕ್ತ ವೇದಿಕೆ ನೀಡಲು ಸಿದ್ದವಿರುವವರು ನಾವು.

ನಾವು ಹೇಗೆ ಕೆಲಸ ಮಾಡುತ್ತೇವೆ .

 • ಸರ್ವ ಅವಕಾಶಗಳನ್ನು ಸರ್ವರ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ (ಮೊಬೈಲ್ ಮೂಲಕ, ಇಂಟರ್ನೆಟ್ ಮೂಲಕ, ಪುಸ್ತಕಗಳ ಮೂಲಕ, ನಮ್ಮ ಸಂಸ್ಥೆಯ ತರಬೇತಿ ಕೇಂದ್ರಗಳ ಮೂಲಕ)

 • ಸ್ಪರ್ಧಾ ಪರೀಕ್ಷೆಗಳ ಪರಿಚಯ, ಸೂಚನೆ, ಪ್ರಕಟಣೆ, ಪರೀಕ್ಷೆಗಳನ್ನು ಎದುರಿಸುವ ಬಗೆ, ತಯಾರಿ-ಸಿದ್ಧತೆ ಪಠ್ಯಕ್ರಮ ಮುಂತಾದ ವಿಷಯಗಳ ಬಗೆಗೆ ಸರಳ ಮತ್ತು ಸೂಕ್ತ ಮಾರ್ಗದರ್ಶನವನ್ನು ನಿಮಗೆ ಅರ್ಥವಾಗುವ ರೀತಿಯಲ್ಲಿ ನಿಮ್ಮಲ್ಲಿ ನೀವೂ ಕೂಡ ಪ್ರಯತ್ನಿಸಬಹುದು ಎಂಬ ಹುಮ್ಮಸ್ಸು ಉಂಟಾಗುವ ರೀತಿಯಲ್ಲಿ ಸಾದರಪಡಿಸುತ್ತೇವೆ.

 • ನಿಮ್ಮ ಯೋಗ್ಯತೆ ಮತ್ತು ಸಾಮರ್ಥ್ಯದ ಅನುಸಾರ ನೀವು ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಹಾಗೂ ಸ್ಪರ್ಧಿಸಿ ಜಯಗಳಿಸಲು ಅಗತ್ಯ ಮಾರ್ಗದರ್ಶನ ಮತ್ತು ಪಠ್ಯಕ್ರಮಗಳ ನೆರವು ನೀಡುತ್ತಿದ್ದೇವೆ.

 • ನಿಮಗೆ ಕಷ್ಟವೆನಿಸುವ ಅನ್ಯಭಾಷೆಯ ಅಥವಾ ಯಾವುದೇ ಪಠ್ಯಕ್ರಮವನ್ನು ಕನ್ನಡಕ್ಕೆ ಭಾಷಾಂತರಿಸಿ ಅಥವಾ ಪಠ್ಯಕ್ರಮವನ್ನು ಸರಳಗೊಳಿಸಿ ನೀವು ಅರ್ಥಮಾಡಿಕೊಂಡು ಅಧ್ಯಯನ ಮಾಡುವಂತೆ ಅವಕಾಶ ಮಾಡಿಕೊಡುತ್ತೇವೆ.

 • ನೀವು ಓದಲೇಬೇಆದ ಪಠ್ಯಕ್ರಮ, ಗಳಿಸಿಕೊಳ್ಳಲೇಬೇಕಾದ ಜ್ಞಾನ ಮೂಲಗಳನ್ನು, ಲೇಖನಗಳನ್ನು, ವಿಚಾರಧಾರೆಗಳನ್ನು ಭಾಷಾಂತರಿಸಿ, ನಿಮ್ಮ ಕನ್ನಡ ಭಾಷೆಯಲ್ಲಿಯೇ ಓದುವಂತೆ ಮಾಡಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಹಂತಕ್ಕೆ ನಿಮ್ಮನ್ನು ಸಿದ್ದಗೊಳಿಸಲಿದ್ದೇವೆ.

 • ನಿಮ್ಮನ್ನು ಪ್ರತ್ಯೇಕವಾಗಿ ತಯಾರಿ ನಡೆಸುವಂತೆ ಅನುವು ಮಾಡಿಕೊಟ್ಟು, ಪ್ರತಿ ಹಂತದಲ್ಲೂ ಸಹಕರಿಸಿ, ನಿಮ್ಮ ತಪ್ಪುಗಳನ್ನು ತಿದ್ದಿ, ನಿಮ್ಮ ಪ್ರಯತ್ನಕ್ಕೆ ಪ್ರೋತ್ಸಾಹಿಸಿ, ನಿಮ್ಮ ವೇಗವನ್ನು ವಿಮರ್ಶಿಸಿ, ನಿಮ್ಮನ್ನು ಸಿದ್ದಗೊಳಿಸಿ ಸ್ಪರ್ಧಿಸಲು, ಜಯಗಳಿಸಲು ನಿಮ್ಮ ಜೊತೆಗಿರುತ್ತೇವೆ.

 • ಜ್ಞಾನವು ಮತ್ತು ಭಾಷೆ ಯಾರ ಅಥವಾ ಯಾವ ಪ್ರಾಂತ್ಯದ ಸೊತ್ತಲ್ಲ. ಹಾಗಾಗಿ ನಿ ಜವಾಗಿ ಕಲಿಕೆಯ ಹಸಿವಿರುವ, ಸಾಧನೆಯ ಗುಂಗಿರುವ ಪ್ರತಿಯೊಬ್ಬರಿಗೂ ನಾವು ಅತ್ಯಂತ ಸಮರ್ಥ ದಾರಿದೀಪವಾಗಿರುತ್ತೇವೆ.

 • ನೀವು ವಿದ್ಯಾರ್ಥಿಯಾಗಿರಿ, ಸ್ಪರ್ಧಾರ್ಥಿಯಾಗಿರಿ ಅಥವಾ ಜ್ಞಾನಾರ್ಥಿಯಾಗಿರಿ, ಇಲ್ಲ ಕೇವಲ ಕುತೂಹಲಕ್ಕೆ ಓದುವ ಹವ್ಯಾಸ ಬೆಳಸಿಕೊಂಡಿರಿ, ಅಥವಾ ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಸಹೋದರ-ಸಹೋದರಿಯರಿಗೆ ಹೇಳಿಕೊಡುವ ಸಲುವಾಗಿ ಓದುವವರಾಗಿರಿ, ಯಾರೇ ಆಗಿರಿ ನಿಮ್ಮ ನೆರವಿಗೆ, ಸರಳವಾಗಿ, ಸಮರ್ಥವಾಗಿ ಮತ್ತು ಸಮರ್ಪಕವಾಗಿ ‘ಶ್ರೀ ವಾಸುದೇವ ಅಕ್ಷರ ಧಾಮ’,‘ಸ್ವಾಧ್ ಜ್ಞಾನ ಸುಧಾ’ ಪತ್ರಿಕೆಯ ಮೂಲಕ ಸದಾ ಕಾಲ ಸಿದ್ದವಿರುತ್ತದೆ.

 • ಮತ್ತು ಮುಖ್ಯವಾಗಿ ನೀವು ಮನೆಯಲ್ಲೇ ಕುಳಿತು ಪರೀಕ್ಷೆಗಳಿಗೆ ತಯಾರಾಗಲು, online ಪರೀಕ್ಷೆಗಳ ಮೂಲಕ ನಾವು ಸಹಾಯ ಮಾಡುತ್ತೇವೆ.

ನಾವು ಏನು ಮಾಡುತ್ತೇವೆ ?

 • ಶಿಕ್ಷಣದ ಅರ್ಥಕ್ಕೆ ಪರಿಪೂರ್ಣತೆ ನೀಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.

 • ಶಿಕ್ಷಣದ ಮೂಲಕ ಸಿಗುವ ಸೌಲಭ್ಯಗಳು ಸರ್ವರಿಗೂ ಸಮವಾಗಿ ಸಿಗುವಂತೆ ಮಾಡಲು ನಾವು ಶ್ರಮಿಸುತ್ತೇವೆ.

 • ಭಾಷೆಯು ಅವಕಾಶಗಳ ಸದುಪಯೋಗ ಪಡಿಸುಕೊಳ್ಳುವಿಕೆಯಲ್ಲಿ ಉಂಟು ಮಾಡುವ ತಡೆಯನ್ನು ನಾವು ನಿವಾರಿಸಲಿದ್ದೇವೆ.

 • ಅಸಹಾಯಕ ಮತ್ತು ಅಶಕ್ತ ವಿದ್ಯಾರ್ಥಿಗಳಿಗೆ, ಪರೀಕ್ಷಾತ್ರಿಗಳಿಗೆ ಪೋಷಕರುಗಳಿಗೆ ಶೈಕ್ಷಣಿಕವಾಗಿ, ಭಾಷಾತಾರತಮ್ಯತೆಯಲ್ಲಿ, ಭೌಗೋಳಿಕವಾಗಿ ಅವಕಾಶ ಮತ್ತು ಸೌಲಭ್ಯಗಳಲ್ಲಿ ಆಗುವ ತೊಡುಕು ತೊಂದರೆಗಳನ್ನು ನಿವಾರಿಸಿಕೊಳ್ಳುವಲ್ಲಿ ನಾವು ಮಾರ್ಗದರ್ಶನ ಮತ್ತು ಸಹಾಯ ಮಾಡಲಿದ್ದೇವೆ.

 • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ಮಾರ್ಗದಲ್ಲಿ ನಾವು ಪರೀಕ್ಷೆಯ ಪಠ್ಯಕ್ರಮವನ್ನು ಕನ್ನಡದಲ್ಲಿ ಸರಳೀಕರಿಸಿ ಅರ್ಥೈಸಲಿದ್ದೇವೆ ?

 • ಲಭ್ಯವಿರುವ ಅವಕಾಶಗಳ ಮಾಹಿತಿಯನ್ನು ನಿಮ್ಮ ಮುಂದಿಟ್ಟು ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಉಪಾಯಗಳನ್ನು ನೀಡಲಿದ್ದೇವೆ.

 • ನಮ್ಮ ಕರ್ನಾಟಕದ ಸರ್ವ ಸಂಸ್ಥೆಗಳಲ್ಲೂ ನಮ್ಮ ಕನ್ನಡಿಗರೇ ಕೆಲಸಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಉದ್ಯೋಗಾಂಕ್ಷಿಗಳನ್ನು ನಾವು ಸಮರ್ಥಗೊಳಿಸಲಿದ್ದೇವೆ.

 • ಶಿಕ್ಷಣವೆಂಬುದು, ಸ್ಪರ್ಧೆ ಎಂಬುದು ಮತ್ತು ಜ್ಞಾನದ ಧಾರೆಯು ಸರ್ವರಿಗೂ ಸಮಪಾಲು ಎಂಬ ಮಾತಿಗೆ ನಾವು ದಾರಿಯಾಗಲಿದ್ದೇವೆ.

 • ಶಿಕ್ಷಣವೆಂಬುದು ಸಾಮರ್ಥ್ಯದ,ಜ್ಞಾನದ ಮತ್ತು ವಿಪುಲ ಅವಕಾಶಗಳ ಮೂಲ ಎಂಬುದನ್ನೂ ಆತ್ಮವಿಶ್ವಾಸದ ಮೂಲವೆಂಬುದನ್ನು ಪ್ರತಿಪಾದಿಸಲಿದ್ದೇವೆ.

ನೀವು ಹೇಗೆ ನಮ್ಮ ಪ್ರಯೋಜನ ಪಡೆಯಬಹುದು

 • ನಮ್ಮ ಎಲ್ಲಾ ಪ್ರಯೋಜನ ಪಡೆಯಲು ಮೊದಲು ನೀವು ನಮ್ಮ ಸದಸ್ಯರಾಗಬೇಕು.

 • ಸದಸ್ಯತ್ವದ ಶುಲ್ಕದ ವಿವರಗಳನ್ನು ಪ್ರತ್ಯೇಖವಾಗಿ ನೀಡಲಾಗುತ್ತದೆ.

 • ನಿಮ್ಮ ಮೊಬೈಲ್ ಮತ್ತು ಇಂಟರ್ನೆಟ್, ಕಂಪ್ಯೂಟರ್ ಗಳ ಮೂಲಕ ನೀವು ನಿಮ್ಮ ಆಧ್ಯತೆಯ ತಯಾರಿ ನಡೆಸಬಹುದು

 • Online ಪರೀಕ್ಷೆಗಳನ್ನು ಪ್ರಾಕ್ಟೀಸ್‌ ಮಾಡಬಹುದು.

 • ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು

 • ದೈನಂದಿನ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಆಗು-ಹೋಗುಗಳ ಬಗೆಗೆ ವಿಚಾರ ತಿಳಿದುಮಂಡಿಸಬಹುದು.

 • ನಿಮ್ಮ ಅಭಿಪ್ರಾಯ, ವಿಚಾರಧಾರೆಗಳನ್ನು ಅಭಿವ್ಯಕ್ತಿಗೊಳಿಸಬಹುದು.

 • ನೀವು ನಿಮಗೆ ಬಿಡುವಿಲ್ಲದ ಸಮಯದಲ್ಲೂ ಕೂಡ ನಿಮಗೆ ಸಿಗಬಹುದಾದ ಅವಕಾಶ, ಸೌಲಭ್ಯ ಮತ್ತು ಸ್ಪರ್ಧೆಗಳ ಬಗೆಗೆ ಮಾಹಿತಿ ಪಡೆಯಬಹುದು.

 • ನಿಮ್ಮ ಅಗತ್ಯಗಳ ಬಗೆಗೆ, ಸಂದೇಹಗಳ ಬಗೆಗೆ ನೀವು ನೇರವಾಗಿ ಉತ್ತರ ಪಡೆಯಬಹುದು.

‘ಸದಸ್ಯರಾಗಿ –ಸಂಗಡಿಗರನ್ನು ಸದಸ್ಯರನ್ನಾಗಿಸಿ – ಸಧಭಿರುಚಿಯನ್ನು ಸಂಭ್ರಮಿಸಿ’